FLASH NEWS

WELCOME TO GWLPS KUMBLA BLOG. BLOG ADRESS IS........... 11329gwlpskumbla.blogspot.in animated-school-image-0007 Thank U
2016 INTERNATIONAL YEAR OF PULSES

ABOUT US

     ಸಪ್ತಭಾಷಾ ಸಂಗಮಭೂಮಿಯಾದ ಕಾಸರಗೋಡಿನ ಕುಂಬಳೆಯ ಕುಂಟಗೇರೇಡ್ಕದಲ್ಲಿ ನಮ್ಮೀ ಶಾಲೆಯು ಕಾರ್ಯಾಚರಿಸುತ್ತಿದೆ. ೧೯೨೬ ರಲ್ಲಿ ಸಾಮಾಜಿಕವಾಗಿ  ಮತ್ತು ಆರ್ಥಿಕವಾಗಿ ಹಿಂದುಳಿದ ಈ ಪ್ರದೇಶದ ಬಡ ದಲಿತರ ಅಭಿವೃಧಿಗಾಗಿ ಶಾಲೆಯು ಸ್ತಾಪಿತವಾಯಿತು. ಪ್ರಾರಂಬ ಕಾಲದಲ್ಲಿ ಸಮೀಪದ ದೇವಿನಗರದ ಬಾಡಿಗೆ ಕಟ್ಟಡವೊಂದರಲ್ಲಿ ತರಗತಿಯು  ನಡೆಯುತ್ತಿತು. ಬಳಿಕ  ಪ್ರಸ್ತುತವಿರುವ  ಸರಕಾರಿ ಕಟ್ಟಡದಲ್ಲಿ   ಬೋಧನೆಯು ಮುಂದುವರಿಯಿತು .

       ೨. ೧೭ ಎಕ್ಕರೆ  ಸ್ಥಳದಲ್ಲಿ  ೮ ತರಗತಿ ಕೋಣೆಗಳನ್ನು  ಹೊಂದಿದ  ಶಾಲಾ  ಕಟ್ಟಡವನ್ನು  ನಿರ್ಮಿಸಲಾಗಿದೆ .  ೧-೪ ನೇ   ತರಗತಿ ಯವರೆಗೆ   ಕನ್ನಡ  ಮತ್ತು ಮಲಯಾಳ  ಮಾಧ್ಯಮದಲ್ಲಿ  ಶಿಕ್ಷಣವನ್ನು  ನೀಡಲಾಗುತ್ತಿದೆ . ತರಗತಿ ಕೋಣೆಗಳನ್ನು  ಆಕರ್ಷಕ  ಬಣ್ಣ ಮತ್ತು   ಚಿತ್ರಗಳಿಂದ  ಅಲಂಕರಿಸಲಾಗಿದೆ.  ಪ್ರತಿಯೊಂದು  ತರಗತಿಯ  ನೆಲಕ್ಕೆ  ಟೈಲ್ಸ್  ಹಾಸಲಾಗಿದೆ  ಮತ್ತು ಎಲ್ಲಾ ತರಗತಿಗಳಿಗೆ  ನಳ್ಳಿ  ನೀರಿನ ವ್ಯವಸ್ಥೆ  ಮಾಡಲಾಗಿದೆ. ನುರಿತ  ಅಧ್ಯಾಪಕರು  ಸುಸಜ್ಜಿತ  ಕಂಪ್ಯೂಟರ್  ಲ್ಯಾಬ್ , ಎಲ್ .ಸಿ . ಡಿ , ಮೈಕ್  ಸೆಟ್ , ಒಂದನೇ  ತರಗತಿಯಿಂದಲೇ  ಕನ್ನಡ  ಮತ್ತು  ಮಲಯಾಳಂ  ಮಾಧ್ಯಮದಲ್ಲಿ  ಕಂಪ್ಯೂಟರ್  ಮತ್ತು  ಇಂಗ್ಲೀಷ್  ಬೋಧನೆ  , ಕಲೆ , ವೃತ್ತಿ ಪರಿಚಯ , ಸಂಗೀತ  ಕಲಿಕೆ  , ಶುಚಿ ರುಚಿಯಾದ ಬಿಸಿಯೂಟ  ಪದ್ಧತಿ , ವಾರದಲ್ಲಿ  ಎರಡು  ಸಲ  ಹಾಲು  ವಿತರಣೆ  , ವಾರಕ್ಕೊಮ್ಮೆ  ಮೊಟ್ಟೆ  ವಿತರಣೆ, ಉಚಿತ  ಸಮವಸ್ತ್ರ  ವಿತರಣೆ , ಉಚಿತ  ಪಾಠ  ಪುಸ್ತಕ  ವಿತರಣೆ ,. ಸರಕಾರದ ವಿವಿಧ ಅನುದಾನಗಳನ್ನು  ಕ್ಲಪ್ತ  ಸಮಯದಲ್ಲಿ ಅರ್ಹರಿಗೆ ನೀಡುವುದು , ಬಾಲಕರಿಗೆ  ಮತ್ತು  ಬಾಲಕಿಯರಿಗೆ  ಪ್ರತ್ಯೇಕ  ಶೌಚಾಲಯದ  ವ್ಯವಸ್ಥೆ  , ವಿಶಾಲವಾದ  ಕ್ರೀಡಾಂಗಣ   ............... ಇವು  ನಮ್ಮ  ಶಾಲೆಯ  ಪ್ರತ್ಯೇಕತೆಗಳಲ್ಲಿ  ಕೆಲವು ಮಾತ್ರ . 

   ನಮ್ಮೀ  ಶಾಲೆಯ  ಪುಟಾಣಿ  ಮಕ್ಕಳು   ವಿವಿಧ ಮಟ್ಟದ  ಸ್ಪರ್ಧೆಗಳಲ್ಲಿ  ಮತ್ತು ಮೇಳಗಳಲ್ಲಿ  ಭಾಗವಹಿಸಿ  ಶಾಲೆಗೆ  ಕೀರ್ತಿಯನ್ನು ತರುತ್ತಿದ್ದಾರೆ . ಈ  ಶಾಲೆಯ  ಹಳೆಯ  ವಿಧ್ಯಾರ್ಥಿಗಳು  ಹಲವಾರು  ಉನ್ನತ ಹುದ್ದೆಗಳನ್ನು  ಅಲಂಕರಿಸಿರುವುದು  ಹೆಮ್ಮೆಯ  ವಿಷಯವೇ  ಸರಿ .  

 











No comments:

Post a Comment