ನಮ್ಮ ಶಾಲೆಯಲ್ಲಿ ಸಾಕ್ಷರ ಸಹವಾಸ ಶಿಬಿರ ಇಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು . ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಮೆಂಬರ್ ರಮೇಶರವರು ನಡೆಸಿದರು . ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಪ್ರೇಮಲತಾ ಸಿ , ಪಿ . ಟಿ . ಎ . ಅಧ್ಯಕ್ಷ ಶ್ರೀ ಕೊಗ್ಗು , ಶಾಲಾ ಅಧ್ಯಾಪಕ ಶ್ರೀ ಸುಬ್ರಹ್ಮಣ್ಯನ್ , ಶಿಕ್ಷಕಿ ಜಯಲಕ್ಷ್ಮೀ , ಪಿ . ಟಿ . ಎ . ಉಪಾಧ್ಯಾಕ್ಷೆ ಶ್ರೀಮತಿ ಶರ್ಮಿಳ , ಎಂ . ಪಿ . ಟಿ . ಎ ಅಧ್ಯಕ್ಷೆ ಶ್ರೀಮತಿ ಲತಾ ಮೊದಲಾದವರು ಉಪಸ್ಥಿತರಿದ್ದರು . ಶಾಲಾ ಶಿಕ್ಷಕರಾದ ಚಂದ್ರ ಶೇಖರ ಎ . ಏನ್ ಮತ್ತು ಸುಬ್ರಹ್ಮಣ್ಯನ್ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯ ನಿರ್ವಹಿಸಿದರು . ಬಾಯಿಥಾಳ ಹಾಡುವುದು ,ಬಾಯಿಥಾಳ ಹಾಡಿ ಅಭಿನಯಿಸುವುದು ,ಒಗಟುಗಳು ,ವಾಕ್ಯಗಳನ್ನು ಕ್ರಮೀಕರಿಸಿ ಕಥೆಯನ್ನು ರಚಿಸುವುದು , ಪದ್ಯಕ್ಕೆ ರಾಗ ಹಾಕಿ ಹಾಡುವುದು ಮೊದಲಾದ ಭಾಷಾ ಆಟಗಳನ್ನು ಶಿಬಿರದಲ್ಲಿ ಒಳಪಡಿಸಲಾಗಿತ್ತು . ಬಳಿಕ ಹುಲಿ ದನ ಆಟ , ಪುಗ್ಗೆ ಆಟ ಮತ್ತು ಇತರ ಕೆಲವು ಹಳ್ಳಿಯ ಆಟಗಳನ್ನು ಕಲಿಸಲಾಯಿತು . ಇದು ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮನಸ್ಸನ್ನು ರಂಜಿಸಿತು
No comments:
Post a Comment